ಬಿಗ್‌ಬಾಸ್‌ ಮನೆಯಲ್ಲಿ ನಡಿಯಲೇಬೇಕಾ ಸೀಸನ್ಗೊಂದು ಲವ್‌ಸ್ಟೋರಿ

ಬಿಗ್‌ಬಾಸ್ ಮನೆಯೊಳಗೆ ಏನಾದ್ರೂ ಮಾಡಿ ಒಂದು ಲವ್‌ಸ್ಟೋರಿ ಕ್ರಿಯೇಟ್ ಮಾಡ್ಬೇಕು ಅಂತ ಚಾನಲ್‌ನವರು ಆರಂಭದಲ್ಲೇ ಪರೋಕ್ಷವಾಗಿ ಒಂದು ಪ್ರಯsತ್ನ ಆರಂಭಿಸ್ತಾರೆ. ವಿಚಿತ್ರ ಅಂದ್ರೆ ವಾರಾಂತ್ಯದಲ್ಲಿ ಸುದೀಪ್ ಅವರೂ ಕೂಡ ಇದಕ್ಕೆ ತುಪ್ಪ ಸುರೀತಾರೆ. ಆ ಸ್ಪರ್ಧಿಗಳ ನಡುವೆ ಆ ರೀತಿಯ ಭಾವನೆ ಇಲ್ಲದೇ ಹೋದ್ರೂ ತುಂಬ ಕಷ್ಟಪಟ್ಟು ಅವರ ನಡುವೆ ಏನೋ ಇದೆ ಅನ್ನೋ ಹಾಗೆ ಬಿಂಬಿಸೋ ಬಲವಂತದ ಪ್ರಯತ್ನ ಮಾಡಲಾಗುತ್ತದೆ. ಅವರು ಸ್ನೇಹಿತರಾಗಿದ್ದರೂ ಪ್ರೇಮಿಗಳ ಹಾಗೆ ತೋರಿಸುವ ಬಿಗ್‌ಬಾಸ್ ಪ್ರಯತ್ನ ನಿಜಕ್ಕೂ ವಿಚಿತ್ರ ಅನ್ನಿಸದೇ ಇರೋದಿಲ್ಲ. ಒಟ್ಟಾರೆಯಾಗಿ ಒಂದು ಸೀಸನ್‌ನಲ್ಲಿ ಒಂದು ಲವ್ ಸ್ಟೋರಿ ಇರಲೇಬೇಕು ಅನ್ನೋ ಬಿಗ್‌ಬಾಸ್ ಕಾರ್ಯಕ್ರಮದ ನಿರ್ದೇಶಕರು ಟಿ.ಆರ್.ಪಿಗಾಗಿ ಇನ್ನೂ ಅನೇಕ ಪ್ರಯತ್ನ ಮಾಡೋದು ಶೋನ ಘನತೆಯನ್ನೂ ಹಾಳು ಮಾಡ್ತಿದೆ ಅನ್ನೋದು ಯಾಕೆ ಅರ್ಥ ಆಗೋದಿಲ್ವೋ ಗೊತ್ತಿಲ್ಲ. ನೋಡಿ ಇಷ್ಟಪಟ್ಟರೆ ದಯವಿಟ್ಟು ಶೇರ್‌ ಮಾಡಿ, ಲೈಕ್‌ ಮಾಡಿ.
Scroll to Top